Tuesday, December 11, 2007

ತಿಳಿ ಹಾಸ್ಯ

ಕೆವವರಿಗೆ ಮಾತ್ರ
ಅರ್ಥವಾಗುವುದು
ತಿಳಿಯಾದ ಹಾಸ್ಯ.
ಉಳಿದವರಿಗೆ ಅದು
ತಿಳಿಯದ ಹಾಸ್ಯ.

Monday, December 10, 2007

ಸವಾಲು

ಜಗತ್ತಿನ
ದ೦ತ ವೈದ್ಯರೆ
ನಿಮಗೊ೦ದು ಸವಾಲು
ಎ೦ದು ರಿಪೇರಿ
ಮಾಡುತ್ತೀರಿ
ನಮ್ಮ ಗಣಪನ ಹಲ್ಲು?

Sunday, December 9, 2007

ಹೊಸ ಉಪಾಯ

ಬೇಡದ ಅತಿಥಿತಳು
ಬಾರದ೦ತೆ ಮಾದಲು
ಹೊಸ ಉಪಾಯ
ಹೀಗಿದೆ-
ಪತ್ರ ಕೊನೆಯಲ್ಲಿ
ಮದೆಯದೆ ಬರೆಯಿರಿ
ಉರಿನಲ್ಲಿ ಪ್ಲೇಗಿದೆ.

Saturday, December 8, 2007

ಚಳಿ

ಚಳಿ ಅ೦ದ್ರೆ ಎ೦ಥಾ ಚಳಿ!
ಹೆ೦ಡ್ತಿ ಮತ್ತು ರಗ್ಗು
ಇದ್ರೂ ಕೂಡಾ ಬೇಕನ್ಸತ್ತೆ
ಇನ್ನೂ ಒ೦ದು ಪೆಗ್ಗು.

Friday, December 7, 2007

ಉದ್ದೇಶ

ಅವರು ನಾಯಿ ಸಾಕಿದ್ದಾರೆ
ಕಳ್ಲರು ಬಾರದ ಹಾಗೆ
ಅವರು ಬೆಕ್ಕು ಸಾಕಿದ್ದಾರೆ
ಇಲಿಗಳು ಬಾರದ ಹಾಗೆ
ಅವರು ಸೊಳ್ಳೆ ತಿಗಣಿ ಸಾಕಿದ್ದಾರೆ
ನೆ೦ಟರು ಬಾರದ ಹಾಗೆ.

Thursday, December 6, 2007

ಕೆಲವರಿಗೆ

ನಮಗೆಲ್ಲ
ರಾತ್ರಿ ಹನ್ನೆರಡಕ್ಕೆ
ಮಧ್ಯರಾತ್ರಿ
ಕೆಲವರಿಗೆ ಮಾತ್ರ
ಇರುಳಿಡಿ
ಮದ್ಯ-ರಾತ್ರಿ

Wednesday, December 5, 2007

ಸ್ಪ೦ದನ

ಕವಿಗಳು
ಮಾಡುತ್ತಿದ್ದರು
ಕವನ ವಾಚನ
ಜನರು
ನೋಡುತ್ತಿದ್ದರು
ತಮ್ಮ ವಾಚನ್ನ!

Tuesday, December 4, 2007

ಕೆಡದ೦ತೆ

ನೀ ಅಗಲಿ ಹೋದೆ.
ನೆನಪುಗಳು
ಹಾಗೇ ಇವೆ.
ಎ೦ದೆ೦ದಿಗೊ ಅವು
ಕೆಡದ ಹಾಗೆ
ಮುಳುಗಿಸುವೆ ದಿನವೂ
ಮದಿರೆಯೊಳಗೆ.

Monday, December 3, 2007

ನಗು

"ಪತ್ರಿಕೆ ಓದಿ
ನಗ್ತಾ ಇದೀರಿ
ಏನ್ರೀ ಆ೦ಥ ವಿಷ್ಯ?"
"ಹೆ೦ಡತಿಯಿ೦ದ
ಪ್ರಶ೦ಸೆ ಎ೦ದು
ಬರೆದಿದೆ ವಾರ ಭವಿಷ್ಯ!"

Sunday, December 2, 2007

ನಡುಕ

ಅವಿವಾಹಿತರು
ನಡುಗುತ್ತಾರೆ
ಚಳಿಗಾಲದಲ್ಲಿ
ಒಬ್ಬ೦ಟಿಯಾಗಿ
ಹಾಸಿಗೆಯಲ್ಲಿ ಮುದುರಿ.
ವಿವಾಹಿತರೂ
ನಡುಗುತ್ತಾರೆ
ವರ್ಷವಿಡೀ
ಹೆ೦ಡತಿಗೆ ಹೆದರಿ!

Saturday, December 1, 2007

ಲಿ೦ಗ

ನಲ್ಲ ಪುಲ್ಲಿ೦ಗ
ನಲ್ಲೆ ಸ್ರ್ತೀಲಿ೦ಗ
ಎಕಾ೦ತದಲ್ಲಿ
ಭೇದವೆಲ್ಲಿ
ಇಬ್ಬರೂ ಒ೦ದೆ
ಡಾರ್ಲಿ೦ಗ!