Friday, November 30, 2007

ಅಭಿಪ್ರಾಯ

ಪಾನ ನಿರೋದ
ಬೇಕೇ? ಬೇಡವೆ?
ಎನ್ನುವ ಚರ್ಚಾಗೋಷ್ಠ್ತಿಯಲ್ಲಿ
ಹೇಳಿದನೊಬ್ಬ ಮುಲುದನಿಯಲ್ಲಿ
ಪಾನ
ನಿರೋದ
ಎರಡು ಇರಲಿ.

Thursday, November 29, 2007

ಪ್ರಾಯ

ಹುಡುಗಿ ನೆಡೆದಾಗ
ನಡು ಆಹಾ!
ಬಳುಕುತ್ತದೆ.
ಮುದುಕಿ ನೆಡೆದರೆ
ಅಯ್ಯೊ!
ಉಳುಕುತ್ತದೆ.

Wednesday, November 28, 2007

ಭಾಷಣ

ಆರ೦ಭದಲ್ಲಿ
ಹೇಳುತ್ತಾರೆ
ಎರಡೇ ಎರಡು ಮಾತು
ಮುಗಿಸುವಾಗ
ಆಗುವುದೇ ಬೇರೆ
ಎರಡೊ ಕಿವಿ ತೂತು!

Tuesday, November 27, 2007

ವ್ಯತ್ಯಾಸ

ಕಣ್ಣಿಲ್ಲ, ಕಾಲಿಲ್ಲ
ಎ೦ದು ಸತ್ಯ ಹೇಳಿ
ಬೇಡುವುದು
ಭಿಕ್ಷಾಟನೆ
ಸಾವಿರ ಸುಳ್ಳು ಹೇಳಿ
ಮತ ಯಾಚಿಸುವುದು
ಚುನಾವಣೆ

Monday, November 26, 2007

ಸಲಹೆ

ಸ೦ಸಾರವೆ೦ಬ
ಪರೀಕ್ಶೆಯಲ್ಲಿ
ಪಾಸಾಗಬೇಕಾ?
ಚೆನ್ನಗಿ ಓದಿ
ಅರ್ಥಮಾಡಿಕೊಳ್ಳಿ
ಮಡದಿ ಎ೦ಬ
ದಪ್ಪ ಪುಸ್ತಕ!

Sunday, November 25, 2007

ಬೇಲೂರು-ಐಹೊಳೆ

ಖುಷಿಯಾಗಿದ್ದರೆ ಈಎ
ಬೇಲೂರು ಶಿಲಾಬಾಲಿಕೆ
ಬೇಸರವಾದರೆ
ಅಶ್ರುಧಾರೆ
EYE ಹೊಳೆ!

Saturday, November 24, 2007

ಅಭಿಪ್ರಾಯ

ನಾನು ಬರೆದಿದ್ದೇನೆ
ಪ್ರೀತಿ ಪ್ರೇಮದ ಬಗ್ಗೆ
ನೂರಾರು ಹನಿಗವನ
ಚುಟುಕ.
ನನ್ನಕೆಯ ಪ್ರಕಾರ
ಅವು ಕವಿತೆಗಳೇ ಅಲ್ಲ
ಅತ್ಯ೦ತ ಉತ್ತಮ
ನಾಟಕ!

Friday, November 23, 2007

ಇಷ್ಟ

ಎಷ್ಟು ಯತ್ನಿಸಿದರೂ
ಕೂರುವುದಿಲ್ಲ ನನ್ನ
ಸೊ೦ಟದ ಮೇಲೆ ಕೊಡ.
ತರುಣಿಯರ
ನಡುವೆ ಇಷ್ಟ
ಕೂಡಗಳಿಗೂ ಕೂಡಾ!

Thursday, November 22, 2007

ಹುಡುಗರು

ಒಲವಿನ ಓಲೆ
ಬರೆಯುತ್ತಾರೆ
ನೀನೆ ನನ್ನ ನಳಿನಾಕ್ಷಿ.
ಉತ್ತರ ಬಾರದೆ
ಇದ್ದರೆ ಕೊನೆಗೆ
ಅನ್ನುತ್ತಾರೆ ಹುಳಿ ದ್ರಾಕ್ಷಿ!

Wednesday, November 21, 2007

ಇರುವುದಿಲ್ಲ

ಕನ್ನಡಿಯ ಮು೦ದೆ
ನಿ೦ತ ಯುವತಿ
ಮೈಕಿನ ಮು೦ದೆ
ನಿ೦ತ ಸಾಹಿತಿ
ಇಬ್ಬರಿಗೂ
ಇರುವುದಿಲ್ಲ
ಸಮಯದ ಮಿತಿ.

Tuesday, November 20, 2007

ಸಾರ್ವಜನಿಕ

ಸಾರ್ವಜನಿಕ
ಮೂತ್ರಿಗಳಲ್ಲಿ
ಎರಡು ಬಗೆ
ಒಂದು ಗ೦ಡಸರಿಗೆ,
ಇನ್ನೊ೦ದು ಹ೦ಗಸರಿಗೆ
ದುರ್ವಾಸನೆ ಮಾತ್ರ
ಎಲ್ಲರಿಗೆ.

Monday, November 19, 2007

ಅ೦ತಿಮ

ಸತ್ತಮೇಲೆ
ಸತ್ತವರನ್ನು
ಮರೆಯುತ್ತಾರೆ ಜನ.
ಆದ್ದರಿ೦ದಲೆ
ಸತ್ತ ತಕ್ಷಣ
ಅ೦ತಿಮ ನಮನ!

Sunday, November 18, 2007

ಬೇಡಿಕೆ

ಬೇಡುತ್ತಿದ್ದರೆ
ಹೆತ್ತವರು
ದೇವರನ್ನು
ಬರಬಾರದೆ
ಶಿಕ್ಷಣ ಖಾತೆಗೂ
ಒಬ್ಬ ಶೇಷನ್ನು?
ತಪ್ಪಿಸಲು
ಹಾಳು
ಡೋನೇಶನ್ನು!

Saturday, November 17, 2007

ನಾಸಿಕ

ಮರುಳಾಗಿದ್ದೆ ಅ೦ದು
ಇವಳ ನೀಳ ನಾಸಿಕ ಕಂಡು
ಹಾಡಿ ಹೊಗಳಿದ್ದೇ ಆಹಾ!
ಸ೦ಪಿಗೆಗಿಂತ ಸು೦ದರ.
ಅನ್ನಿಸುತ್ತಿದೆ ಇಂದು-
ಎಂಥ ದರಿದ್ರ ಮೂಗು!
ಕೇಳುತ್ತಿದ್ದಾಳೆ
"ಕುಡಿದು ಬ೦ದಿರಾ?"

Friday, November 16, 2007

ಚುಟುಕು

ಚಿಕ್ಕದಾದರೂ
ಅಕಾರ
ಚಿಕ್ಕದಲ್ಲ

ಖಾರ.

Thursday, November 15, 2007

ದೇವರೆ (ಮಿನಿ ಮನವಿಗಳು)


ಕೊಡು ದೇವರೆ
ವರ.
ಪೊಳ್ಳು ಭರವಸೆ
ನೀಡದಂಥ
ಆಡದೇ ಮಾಡುವಂಥ
ಸಚಿ-ವರ



ಕೊಡು ದೇವರೆ
ವರ.
ಉರಿ೦ದೂರಿಗೆ
ವರ್ಗವಾಗದ ಹಾಗೆ
ಸ್ಥಾ-ವರ.



ಕೊಡು ದೇವರೆ
ವರ.
ಕುಡಿದು ವಾಹನ
ಓಡಿಸದಂತ
DRYವರ.



ಕೊಡು ದೇವರೆ
ವರ.
ನೀನು ಎಲ್ಲಿರುವೆ
ಹೇಗಿರುವೆ
ಏಕಿರುವೆ
ಇತ್ಯಾದಿ
ವಿ-ವರ.

Prologue

Dundi Raj is one of the most prominent poet and novelist in Kannada. Well known of all his works are short-poems he published over the years in many compilations like ಪಾಡ್ಯ ಬಿದಿಗೆ ತದಿಗೆ, ಇನ್ನೂರು ಹನಿಗವನಗಳು etc. One cannot stop laughing at wit and humor in his short-poems.

Dund Raj Dina is a blog where I try to post one of his short-poems from his book ಹನಿಖಜಾನೆ. This is covers all of the short-poems he has ever written. Sure you would love it to read. If you like any of the poems, please consider to buy a copy from the link.

Hope all Kannadigas out there enjoy the saga of his short poems.